ಒಲವು
ರಚನೆ : ಎಚ್ ಎನ್ ಶಶಾಂಕ್
----------------------------------
ಹೇ ಮನದ ಒಲವುಗಳೇ.. ಎತ್ತೆತ್ತ ಓಡುವಿರಿ ನನಗರಿಯದೆ, ತನು ಮರೆತಾಗಿದೆ ಆ ಕುಸುಮದಾ ನೆನಪುಗಳ ಮನ ಬರಿದಾಗಿದೆ ಹೊತ್ತಾ ಭವಣೆಗಳಾ... ಹುಟ್ಟು ಸಾವೆಂಬ ಕಗ್ಗತ್ತಲ ಸೇತುವೆಯಡಿ ಆಕೆ ಚೆಲ್ಲಿದಾ ಚಂದ್ರಕಾಂತಿ ಅನಿತ್ಯ, ಮತ್ತೆ ಮತ್ತಾ ಬೆಳಕಿಗಾಗಿ ಸವೆದರೂ ಬಾಳೊಂದು ಸಾಗಬೇಕೆನ್ನುತಿದೆ ಜೀವನದ ಸತ್ಯ...
----------------------------------
ನೋಂದಣಿ ಐಡಿ : KPF-S1-5371