Submission 715

ಒಂದೇ ತುಡಿತ

ರಚನೆ : ಭವ್ಯ ಅಶೋಕ್ ಸಂಪಗಾರ್

----------------------------------

ಒಬ್ಬ ದೇಶ ಕಾದರೆ ಇನ್ನೊಬ್ಬ ನಮ್ಮ ಹಸಿವೆ ಕಳೆಯುತ್ತಾನೆ. ಒಬ್ಬ ಶಸ್ತ್ರಗಳ ಗೆಳೆಯನಾದರೆ ಇನ್ನೊಬ್ಬ ನೇಗಿಲಿನ ಒಡೆಯ. ಒಬ್ಬನ ರಕ್ತ ದೇಶಭಕ್ತಿಯ ಕಾವು ಹಚ್ಚುವುದು ಇನ್ನೊಬ್ಬನ ಬೆವರು ಒಡಲನ್ನವಾಗಿ ಬೇಗೆ ನೀಗುವುದು. ಒಬ್ಬ ಕ್ರಾಂತಿಯ ಕಿಡಿಯಾದರೆ ಇನ್ನೊಬ್ಬ ಕಾಯಕಯೋಗಿ. ಅವರಿಬ್ಬರಿಗೂ ಬಹಳ ವ್ಯತ್ಯಾಸವೇನಿಲ್ಲ ಒಂದೇ ಮಣ್ಣಿಗಾಗಿ ಅವರ ಮಿಡಿತ ತಮ್ಮವರ ಪಾಲನೆಯದೇ ತುಡಿತ.

----------------------------------

ನೋಂದಣಿ ಐಡಿ : KPF-S1-5311

0
Votes
273
Views
1 Year
Since posted

Finished since 512 days, 11 hours and 26 minutes.

Scroll to Top