Submission 695

ಭಾವಂತರಂಗ

ರಚನೆ : ಆದರ್ಶ್ ಕೆ. ಟಿ.

----------------------------------

ನನ್ನೆಲ್ಲಾ ಬರಹಗಳಲ್ಲಿ ಇಣುಕುವ ಭಾವ ನೀನು ಆಗಾಗ ಕಣ್ಣಂಚಲ್ಲಿ ಮೂಡುವ ತೇವ ನೀನು ಅದೇನೋ ಸುಖ ನಿನ್ನ ನೆನಪಾದಾಗಲೆಲ್ಲ ಅದೇಕೋ ತುಸು ಕೋಪ ನೀ ಜೊತೆಗಿಲ್ಲವಲ್ಲ ಯಾರಿಗೂ ಹೇಳದ ನೀ ಸುಂದರ ಗುಟ್ಟು ಮನದಲ್ಲಿದ್ದು ಮನೆ ತುಂಬದೇ ಹೋದೆಯಾ ಬಿಟ್ಟು ನಿಂತಂತಿದೇ ಕಾಲದ ಕೈ ಗಡಿಯಾರ ಕೆಟ್ಟು ಕಾರಣ ಹೇಳದೇ ಹೋದಾಗ ನೀ ಕೈ ಕೊಟ್ಟು ಕಾಡುತಿವೆ ಕೈ ಕೈ ಹಿಡಿದು ನಡೆದ ದಿನಗಳು ಕನಸಲ್ಲೂ ಬಿಡದೇ ಆ ಸುಂದರ ಕ್ಷಣಗಳು ಎದುರು ನೋಡುತ್ತಿವೆ ನಿನ್ನೇ ನಯನಗಳು ಬೇಡುತಿವೆ ಮತ್ತೇ ಸೇರಲು ಮನಗಳು.

----------------------------------

ನೋಂದಣಿ ಐಡಿ : KPF-S1-5301

0
Votes
228
Views
1 Year
Since posted

Finished since 436 days, 13 hours and 28 minutes.

Scroll to Top