Submission 605

ತಾಯಿ ಭಾಷೆ

ರಚನೆ : ಸೌಮ್ಯ ಎಂ. ಎಸ್

----------------------------------

ಮಾತೃ ಭಾಷೆಯ ಉಸಿರಿಗೆ ಬಂದಿದೆ ಕುತ್ತು ಯುವ ಪೀಳಿಗೆಗೆ ಏರಿದೆ ಇಂಗ್ಲೀಷಿನ ಮತ್ತು ಮನೆ ಭಾಷೆಯೇ ಮರೆಯಾಗಿ ಇಂಗ್ಲೀಷನ್ನೇ ತುರುಕುತಿಹಳು ಅಮ್ಮನೇ ಆಂಗ್ಲದ ಮಮ್ಮಿಯಾಗಿ ಮಾತೃಭಾಷೆಯ ಮಮತೆಯ ಮಕ್ಕಳ ಪ್ರತಿಷ್ಟೆಗಾಗಿ ಆಂಗ್ಲದಾ ಶಾಲೆಗೆ ದೂಡಿ ಅಪ್ಪನಾಗಿಹನು ಇಂದು ಡ್ಯಾಡಿ ತಾಯಿ ಭಾಷೆಯಿದು ತಾತ್ಸಾರವೇಕೆ ಕೊಡವ ತುಳು ಹಿಂದಿ ನಮಗೇಕೆ ಮದುವೆ ಸಮಾರಂಭಗಳ ಆಮಂತ್ರಣದಲ್ಲೂ ಇಂಗ್ಲೀಷಿನದ್ದೇ ಕಾರುಬಾರು ಸಂಸ್ಕೃತಿಯಿಂದ ದೂರವಾಯಿತೆ ಕನ್ನಡದ ಬೇರು ಮೊಲೆಯುಣಿಸುವಾಗಲೇ ಮುನ್ನುಡಿಯಾಗಲಿ ಕೂಸು ಕಂದಮ್ಮಗಳಿಗೆ ಕನ್ನಡಮ್ಮನ ಜೋಗುಳದ ಝೇಂಕಾರ.... ಭಾಷೆಯ ಉಸಿರು ನಿಂತಿಹುದು ಅಮ್ಮನ ಪಾಠಶಾಲೆಯಲ್ಲಿ ಕನ್ನಡದ ಒಕ್ಕಲು ಉಳಿಯಲಿ ಎಲ್ಲರ ಮನೆ ಮನಗಳಲ್ಲಿ

----------------------------------

ನೋಂದಣಿ ಐಡಿ : KPF-S1-5196

0
Votes
280
Views
1 Year
Since posted

Finished since 510 days, 12 hours and 16 minutes.

Scroll to Top