ಬದುಕ ಒಪ್ಪಿಕೊಳ್ಳಿ
ರಚನೆ : ಅರ್ಚನಾ ಪಾಟೀಲ
----------------------------------
ಚಂದ್ರನಲ್ಲೂ ನೂರಾರು ಕಪ್ಪುಚುಕ್ಕೆಗಳು; ಆದರೂ ಚೆಲ್ಲುವುದಿಲ್ಲವೇ ತಿಳಿ ಬೆಳದಿಂಗಳು! ಎಲ್ಲರ ಮನೆಯಲ್ಲೂ ಕಹಿ ನೋವುಗಳು; ನುಂಗಿ ನಡೆಯುತಿವೆ ಅದೆಷ್ಟೋ ಸಂಸಾರಗಳು ! ಕಣ್ಣು, ಕೈ, ಕಾಲುಗಳಿಲ್ಲದ ಜೀವಗಳು; ಬದುಕ ನಡೆಸಲೇಬೇಕಾದ ಜವಾಬ್ದಾರಿಗಳು! ಬಿರುಕುಗಳಿಲ್ಲದ ಗೋಡೆಗಳಿಲ್ಲ; ಸಾವಿಲ್ಲದ ಮನೆಯೇ ಇಲ್ಲ! ಒಡೆದು ಚೂರಾದ ಮನ ಎಲ್ಲಿಲ್ಲ?? ಎಲ್ಲ ಬೇಡವೆನಿಸುವ ಜಿಗುಪ್ಸೆ ಯಾರಲಿಲ್ಲ?? ತೂತಾದ ಕೊಡಕೂ ಬಣ್ಣ ಹಚ್ಚಿ ಸೋರುವ ಮನೆಯಲೂ ದೀಪ ಹಚ್ಚಿ ಒಮ್ಮೆ ಒಪ್ಪಿಕೊಳ್ಳಿ ಈ ಬದುಕ ಆ ಮನವ ಬಿಚ್ಚಿ!!
----------------------------------
ನೋಂದಣಿ ಐಡಿ : KPF-S1-5054