Submission 697

ಖಾಲೀ ಖಾಲೀ ಎಲ್ಲಾ

ರಚನೆ : ಮಹಾದೇವ ಹಳ್ಳಿ

----------------------------------

ಖಾಲೀ ಖಾಲೀ ಖಾಲೀ ಖಾಲೀ ಎಲ್ಲಾ ನೀ ತಿಳಿದು ನೋಡಿದ್ರೆ ಏನೂ ಇಲ್ಲಾ (ಪಲ್ಲವಿ) ಹಗಲೂ ರಾತ್ರಿ ನಿದ್ದೆ ಇಲ್ದೇ ದುಡಿತೀಯಲ್ಲಾ ಗಳಿಸಿ ಗಳಿಸಿ ಹೊತ್ತು ಒಯ್ಯೋದಿಲ್ಲಾ ಎಷ್ಟೇ ಇದ್ದರೂ ಬೇಕು ಬೇಕು ಅಂತೀಯಲ್ಲಾ ಎಲ್ಲಾನೂ ನೀ ಒಬ್ಬನೇ ತಿನ್ನೋದಿಲ್ಲಾ ಆರಡಿ ಮೂರಡಿ ಖಾಯಂ ನಮಗೆಲ್ಲಾ ಇಷ್ಟಾದರೂ ಇನ್ನೂ ಯಾಕೆ ನಿನ್ಗೆ ತಿಳಿದೇ ಇಲ್ಲಾ ಅಧಿಕಾರ ಹೆಸರೂನು ಬೇಕಂತಿಯಲ್ಲಾ ದುರಾಸೆಯಿಂದ ನೀನು ಬಾಳುತಿಯಲ್ಲಾ ನೂರಾರು ಕಾಯಿಲೆ ಹತ್ತಿ ಒದ್ದಾಡತಿಯಲ್ಲಾ ನರಳಿ ನರಳಿ ಒಂದಿನ ಸಾಯುತಿಯಲ್ಲಾ ಇರುವದರೊಳಗೆ ನೀ ಮಾಡು ಒಳಿತು ಜೀವನದೊಳಗೆಲ್ಲಾ

----------------------------------

ನೋಂದಣಿ ಐಡಿ : KPF-S1-5302

0
Votes
267
Views
1 Year
Since posted

Finished since 510 days, 5 hours and 17 minutes.

Scroll to Top