Submission 517

ಜೀವಗಳ ಕರಾಳ ಕಹಿ ಸತ್ಯ!

ರಚನೆ : ಐಶ್ವರ್ಯಲಕ್ಷ್ಮಿ ಎಸ್ ದೇಶಪಾಂಡೆ

----------------------------------

ಜೀವವಿಲ್ಲದ ಚಿತ್ರಗಳಿಗೆ ಬಣ್ಣದ ಬದುಕಿದೆ ಉಸಿರಾಡುವ ಮನಸ್ಸು ಕರಿ ಬಿಳಿ ಬಣ್ಣವೊಂದೆ ಹಚ್ಚಿದೆ ಕನಸಿರುವ ಜೀವಕೆ ರೆಕ್ಕೆಯೊಂದು ಬೇಕಿದೆ ರೆಕ್ಕೆಯಿರುವ ಜೀವಕೆ ಹಾರಲು ಕಲಿಯುವುದಿದೆ ಹಾರಲು ಕಲಿತ ಹಕ್ಕಿಗೆ ಗುರುತೊಂದು ಬೇಕಿದೆ ಗುರುತು ಸಿಕ್ಕ ಹಕ್ಕಿಯೊಂದು ಎಕಾಂತಕಾಗಿ ಕನವರಿಸಿದೆ ಇರುವುದೆಲ್ಲವ ತೊರೆದು ಇರದಿರುವುದರೆಡೆಗೆ ಜೀವನವೊಂದು ಸಾಗಿದೆ ಇದನ್ನು ಅತಿ ಆಸೆ ಎನ್ನಲಾಗದು ಅನಿವಾರ್ಯತೆ ಎಂದರೆ ತಪ್ಪಾಗಲಾರದು!

----------------------------------

ನೋಂದಣಿ ಐಡಿ : KPF-S1-5088

0
Votes
267
Views
1 Year
Since posted

Finished since 510 days, 5 hours and 14 minutes.

Scroll to Top