Submission 960

ಕಾರ್ಮುಗಿಲು

ರಚನೆ : ಅಶೋಕ ಎಸ್ ಸರ್ಜಾಪುರ

----------------------------------

ಎತ್ತ ನೋಡಲಿ ಸುತ್ತ ಕಾರ್ಮುಗಿಲು ಹೊಲಸು ಬದುಕನು ಹಸನು ಮಾಡಲು ಬಿರಿದ ಭೂಮಿಗೆ ಬಾಯಾರಿಕೆ ನೀಗಿಸಲು ಹೊತ್ತು ತಂದಿವೆ ಹನಿಯ ಬೆಟ್ಟ ತಂಪು ಸೂಸುವ ಗಾಳಿ , ಮರಗಳು. ಚಲಿಸುವ ಮೋಡಗಳ ಕರಿ ನೆರಳು ಕಾಣದು ಇಂದು ಅಡಕಗೊಂಡನು ಸೂರ್ಯ ಕಾರ್ಮೋಡದ ಹಿಂದೆ ಬಾರನು ಭುವಿಯ ಬಾಯಾರಿಕೆ ನೀಗುವರೆಗೆ. ಬಿರಿಬಿರಿ ಬೀಸುವ ಗಾಳಿ ಹೋಗಿದೆ ಭೂ ಪುತ್ರನ ಬುತ್ತಿಯ ತರಲು ಹೊತ್ತು ತರಲಿವೆ ಹತ್ತಾರು ಕಾರ್ಮೋಡಗಳ ತರುವ ಬರದಲಿ ಘರ್ಷಸಿವೆ ದೊಡ್ಡ ದನಿಯಲಿ. ಗಗನ ಗಮನ ಸೆಳೆದಿದೆ ಇಂದು ನಾಕಾರು ಬಣ್ಣಗಳಲಿ ಮಿಂಚು ಮೆಲಕು ಆಕುತಲಿದೆ ಗುಡುಗು ಗದರಿಸುತಲಿದೆ ಹೊಳೆವ ಚಂದ್ರ, ಮಿಣುಕುವ ಚುಕ್ಕಿ,ಮರೆಯಾಗಿವೆ ಗಗನ ಭುವನಗಳ ನೀರಿನೋಕಳಿಗೆ ಕತ್ತಲಿನ ಹೊತ್ತಲ್ಲಿ ತುಂಬಿವೆ ಹತ್ತಾರು ಕೆರೆ , ತೊರೆಗಳು ಮೂಡಿದೆ ಮಂದಹಾಸ ರೈತನ ಬಾಳಲಿ ಧನ್ಯವಾದ ಸಲ್ಲಿಸುತಿಹನು ಅಮರಸಂಗಪ್ಪ ಕಾಣದ ದೇವರಲ್ಲಿ

----------------------------------

ನೋಂದಣಿ ಐಡಿ : KPF-S1-5451

0
Votes
316
Views
1 Year
Since posted

Finished since 506 days, 16 hours and 48 minutes.

Scroll to Top