Submission 916

ಪ್ರೀತಿ

ರಚನೆ : ನಗು ಕಡಿಲುವಾಗಿಲು

----------------------------------

ಒತ್ತಕ್ಷರಗಳು ಕಾತರಿಸುತ್ತಿವೆ ಪದ ಗಂಟಾಗಲು ಆದರೆ ಅಕ್ಷರವೇ ನಾಚುತ್ತಿವೆ ಅವಳ ಎದುರು ಬರಲು ಸ್ವರ ನೀಡುವ ಹೃದಯವು ಜಪಿಸುತ್ತಲಿವೆ ಮೌನದ ಭಾಷೆ ತಿಳಿಯಲು ಮಾತು ಏಕೋ ತೊದಲುತ್ತಿವೆ ವರ್ಣನೆಯ ಶಾಖ ತಟ್ಟಲು ನಾಚಿ ನೀರಾಗುವ ಬಯಕೆಗಳಿವೆ ಭಾವನೆಯ ಬೇಗೆ ಬಿಸಿಯಾಗಲು ಪ್ರೀತಿ ಪ್ರೀತಿಯೇ ಮರುಳಾಗಲಿವೆ ನಮ್ಮಿಬ್ಬರ ಬಯಕೆ ಏನೆಂದು ತಿಳಿಯಲು..

----------------------------------

ನೋಂದಣಿ ಐಡಿ : KPF-S1-5426

0
Votes
262
Views
1 Year
Since posted

Finished since 436 days, 13 hours and 34 minutes.

Scroll to Top