Submission 902

ಕನಸುಗಳ ಬೆಳಕು

ರಚನೆ : ನಿರಂಜನ ಕೇಶವ ನಾಯಕ

----------------------------------

ಕಣ್ಣರಳಲಿ ಕೂಸೆ, ಕತ್ತಲಾಗುವ ಮುನ್ನ, ಬೆಳಕ ಕಿರಣ ಶರಧಿಯಲಿ ಕರಗುವುದು ಚಿನ್ನ, ದಿನದ ಆತುರತೆ ಕೊನೆಯಾಗುವ ಹೊತ್ತು, ವಿರಾಮ ಬದುಕ, ತಬ್ಬಿದ ತುತ್ತು. ಹೂವ ಘಮ ಕರಗಿ, ಮುದುಡುವುದು ಕಂದ, ಹಕ್ಕಿಗಳ ಕಲರವ, ಕುಂದುವುದು ನನ್ನಂದ, ನಿನ್ನ ಎಳೆಯ ಕಣ್ಣುಗಳು ಅರಳಲಿ, ಬಾಡದಂತೆ, ಜಗದ ದಿನದ ಬೆರಗ ಕದಡದೆ, ಹಿಡಿದಿಡುವಂತೆ. ಇದು ಈ ಜನನಿಯ ಎದೆಯಾಳದ ಬಯಕೆ; ದಿನ ಕೊನೆಯಾಗುವ ಮೊದಲು ಈಡೇರಲಿ ಹರಕೆ. ತುಂಬಲಿ ಚೇತನ ನಯನಗಳಲಿ, ಇರದೆ ಕೊರತೆ; ನಾಳೆಗೆ ಇರದು, ಇಂದಿನ ಹೊಸತನದ ಒರತೆ.

----------------------------------

ನೋಂದಣಿ ಐಡಿ : KPF-S1-5417

0
Votes
238
Views
1 Year
Since posted

Finished since 418 days, 13 hours and 22 minutes.

Scroll to Top