Submission 854

ಹೆಣ್ಣು ಮಾಯೆಯಲ್ಲ ವಾತ್ಸಲ್ಯದ ಚಿಲುಮೆ

ರಚನೆ : ನಮಿತಾ ನಾಯಕ್

----------------------------------

ಎಲ್ಲರು ಎನ್ನುವರು ಹೆಣ್ಣೊಂದು ಮಾಯೆ, ಮೂರ್ಖ ಅವಳ ಮಹತ್ವ ನೀ ಅರಿಯೇ ಅರಿಯದೆ ನೀ ಜರಿಯುವುದು ಸರಿಯೇ? ಅರಿತರೆ ಬದಲಾಗುವುದು ನಿನ್ನ ಜೀವನ ಪರಿಯೇ. ಪ್ರೀತಿ ಮಮತೆಯ ಕಣಜ ಈ ಹೆಣ್ಣು, ಈ ಹೆಣ್ಣಿಗೆ ಸಮನಾಗದು ಯಾವುದೇ ಹೊನ್ನು ಕೊಟ್ಟಷ್ಟು ಇಮ್ಮಡಿಯಾಗುವ ವಾತ್ಸಲ್ಯದ ಚಿಲುಮೆ, ಎಲ್ಲರಿಗೂ ತೋರಿಸುವಳು ಒಲುಮೆ ಸಂಸಾರವೆಂಬ ಜವಾಬ್ದಾರಿಯೊಂದಿಗೆ ಹೆಜ್ಜೆ ಇಟ್ಟಿರುವಳು ಎಲ್ಲ ರಂಗದತ್ತ ಭಾನು ಭುವಿಯಲ್ಲೂ ಹಾರಿಸಿರುವಳು ತನ್ನ ವಿಜಯಪತ ಈ ಅಸಾಮಾನ್ಯ ಸಾಧನೆ ಹೆಣ್ಣಿಗೆ ಮಾತ್ರ ಸೀಮಿತ ಹೆಣ್ಣಿನ ಸಂರಕ್ಷಣೆ ಮಾಡಿ ಅವಳನು ಗೌರವಿಸುತ.

----------------------------------

ನೋಂದಣಿ ಐಡಿ : KPF-S1-5390

0
Votes
95
Views
11 Months
Since posted

Finished since 284 days, 10 hours and 27 minutes.

Scroll to Top