Submission 796

ಬಾಲ್ಯ

ರಚನೆ : ಶಾಂತಮಲ್ಲಪ್ಪ

----------------------------------

ಸವಿ ನೆನಪಲಿ ಸುರಿವ ಮಳೆಗೆ ಚಿಗುರುತಿದೆ ಕನಸು ಮರಳಿ ಬರಲಿ ನಮಗೆ ಮಧುರ ಬಾಲ್ಯ ಬದುಕು|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ ಕಲಿತ ಘಳಿಗೆ ಎಷ್ಟು ಚೆಂದ ಸ್ಮರಿಸು ಚಂದ್ರಮ ಬೇಕು ಎನ್ನೋ ಹಟದಿ ಮುಗ್ಧ ಮುನಿಸು ಎಂದೆಂದೂ ಇರಲಿ ಈಗೆ‌ ಮುದ್ದು ಮಗು ಮನಸು|| ಅಕ್ಕ ಪಕ್ಕ ಮನೆಯ ಮಕ್ಕಳ ಜೊತೆಗೆ ಆಟ ಹೊಲ ಗದ್ದೆ ಮರದ ನೆರಳ ಕೆಳಗೆ ಊಟ ಕೆರೆ ಏರಿ ಜಿಗಿದು ನೀರಲ್ಲಿ ಕುಣಿದ ಕೂಟ ಮತ್ತೆ ಮತ್ತೆ ಕಾಡಿದೆ ಬಾಲ್ಯದ ಸವಿ ನೋಟ|| ಮೇಲು ಕೀಳು ಗೊತ್ತೆ ಇರದ ಬಾಲ್ಯ ಬದುಕು ಏಕೋ ಕಾಣೆ ಆಯ್ತು ಅದಕೆ ಸಣ್ಣ ಅಳುಕು ಕಲಿತು ಈಗೆ ಆಯ್ತು ದಿನವೂ ಹಾಕು ಮೆಲಕು ಎಲ್ಲರ ಬಾಲ್ಯದ ಮನಸು ತರಲಿ ಸಣ್ಣ ಬೆಳಕು||

----------------------------------

ನೋಂದಣಿ ಐಡಿ : KPF-S1-5361

0
Votes
91
Views
11 Months
Since posted

Finished since 284 days, 10 hours and 46 minutes.

Scroll to Top