Submission 703

ಹೊಸದಾದ ಹುಡುಗಿ

ರಚನೆ : ಗಿರೀಶಾಚಾರ ಎಸ್

----------------------------------

ಹೊಸದಾದ ಹುಡುಗಿ ಬಂದಳೋ ಓ ದೇವನೇ ಮಸ್ತಾದ ಖುಷಿಯ ತಂದಳೋ ಹೊಸದಾದ ಹುಡುಗಿ ಬಂದು ಮಸ್ತಾದ ಮಧುವ ತಂದು ಸಕ್ಕರೆಯ ರುಚಿಯ ತಂದಳೋ ಓ ದೇವನೇ ಜಿಗಿ ಜಿಗಿ ಜಿಗಿದುಕೊಂಡು ಜಿಂಕೆಯ ಹಂಗೆ ಬಂದು ಮಾಯದ ಜಿಂಕೆಯಾದಳೋ ಓ ದೇವನೇ ಕುಣಿ ಕುಣಿ ಕುಣಿದುಕೊಂಡು ನವಿಲಿನ ಹಂಗೆ ನಾಟ್ಯವಾಡಿ ಚಂಗನೆ ಹಾರಿ ಹೋದಳೋ ಓ ದೇವನೇ ಕನಸಿನಲ್ಲಿ ಕಂಡದೆಲ್ಲ ನಿಜವೆಂದು ನಂಬಿಕೊಂಡು ಬೆಪ್ಪಾಗಿ ಹೋದೆನಲ್ಲೊ ಓ ದೇವನೇ

----------------------------------

ನೋಂದಣಿ ಐಡಿ : KPF-S1-5305

0
Votes
117
Views
1 Year
Since posted

Finished since 310 days, 21 hours and 19 minutes.

Scroll to Top