Submission 673

ಮಮತೆಗೊಂದು ಪದ ಮಹಲು

ರಚನೆ : ಅಶ್ವಿನಿ ರಾಮಪ್ಪ ಕೊರಡ್ಡಿ

----------------------------------

ಸಾಲುವುದೇ ಒಂದು ಜನುಮ ನಿನ್ನ ಕರುಣೆಯ ಕಡಲು ದಾಟಲು ಹೊಗಳಿಕೆಗೆ ಸ್ಪಂದಿಸುವವೇ ಪದಗಳು ನಿನ್ನ ಭಾವದ ಸ್ಪೂರ್ತಿ ಸೇರಲು ನೆತ್ತರು ಹರಿದಾಗಲೂ ನಗುವಿನ ಚಿಲುಮೆಯ ಒಡತಿಯಾದವಳು ದೇಹದ ಪ್ರತಿ ಮೂಳೆ ಮುರಿದ ನೋವು ಒಳಗಿದ್ದರೂ ಖುಷಿಯ ತೇರಿನ ಮೂರ್ತಿಯ ಪ್ರತಿಬಿಂಬವಾದವಳು ಅಗಣಿತ ಬ್ರಹ್ಮಾಂಡದಲ್ಲಿ ಶಾಂತಿ ಸಮಾಧಾನಗಳ ಗುಣಲಬ್ಧದ ಸಿರಿಯಾದವಳು ತ್ಯಾಗ ಕುಲದ ಜ್ಯೋತಿಯೇ ನಿನ್ನ ಪ್ರೀತಿ, ಮಮತೆಯ ಬಂಧನ ಸಮುದ್ರ ತಟದ ಮೇಲೆ ನಿಂತು ನೋಡಿದ ಎಲ್ಲೆಯಂತಿದೆ ಕಣ್ ಪಿಳುಕಿಸುವ ಮೊದಲು ಆವೃತ್ತಿ ಮರೆತ ಬಣ್ಣಗಳಿಂದ ಭವಿಷ್ಯದ ಕನಸು ಕಂಡ ಸಂಪೂರ್ಣತೆಯ ಸಾಕಾರ ಮೂರ್ತಿಯಾದವಳು ಅದೆಷ್ಟೋ ಒಡಲಾಳದ ಭಾವನೆಗಳ ಕಡಲಿಗೆ ಕಾರಣವಾದವಳು ಎನ್ನ ಬದುಕಿನ ವಿಶೇಷಕೆ ಮುನ್ನುಡಿ ಬರೆದು ಅಂತ಼ಃಪ್ರಜ್ಞೆಯ ಕಾಯುವ ಮಮತೆಯೇ... ಒಂದೊಮ್ಮೆ ನೀ ನೀಡಿದ ಜನ್ಮ ನೂರು ಜನ್ಮಕೂ ಉಸಿರು ನೀಡಿರುವಾಗ ಸರೀಸಲಾದೀತೆ ಋಣದ ರಾಶಿಯ ಎನ್ನ ಭಾವದ ಪದಗಳ ನಿನ್ನ ಪಾದಕೆ ಅರ್ಪಿಸುವುದರಿಂದ.....

----------------------------------

ನೋಂದಣಿ ಐಡಿ : KPF-S1-5286

0
Votes
147
Views
1 Year
Since posted

Finished since 347 days, 4 hours and 14 minutes.

Scroll to Top