Submission 645

ಕವಿತೆ

ರಚನೆ : ಮಹಾಂತೇಶ್ ಆರ್ ಕುಂಬಾರ್

----------------------------------

ಯಾರನ್ನೋ ಮೆಚ್ಚಿಸಲು ರಚಿಸದಿರಿ ಇನ್ನ್ಯಾರಿಗೋ ಚುಚ್ಚದಿರಲಿ-ಕವಿತೆ ಯಾವುದೋ ಪಂಥಕ್ಕೆ ಬರೆಯದಿರಿ ಯಾವುದಕ್ಕೂ ಸ್ವಂತಕ್ಕಿರಲಿ-ಕವಿತೆ ಇಲ್ಲದ್ದು ತಂದು ತುರುಕಿ ಬರೆಯದಿರಿ ಇದ್ದುದರಲ್ಲೇ ಎ(ಗೆ)ದ್ದು ಬರಲಿ-ಕವಿತೆ ಯಾವುದನ್ನೂ ತುಚ್ಛವಾಗಿಸದಿರಲಿ ಉಚ್ಛ ಮತ್ತು ಸ್ವಚ್ಛವಾಗಿರಲಿ-ಕವಿತೆ ಮುಖಸ್ತುತಿಗಳಿಗೆ ಮರುಳಾಗದಿರಲಿ ವಸ್ತುಸ್ಥಿತಿಯನು ಸೂಚಿಸಲಿ-ಕವಿತೆ ಇಲ್ಲಸಲ್ಲದುದನೆಲ್ಲವನು ಸಲ್ಲಿಸದಿರಲಿ ಸಾರ್ವತ್ರಿಕವಾಗಿ ಸಲ್ಲಿ ಗೆಲ್ಲಲಿ-ಕವಿತೆ ಇನ್ನ್ಯಾರದೋ ಹಂಗಿನೊಳಗಿರದಿರಲಿ ಬರೀ ಗುಂಗನ್ನೇ ಹಿಡಿಸುತಿರಲಿ-ಕವಿತೆ

----------------------------------

ನೋಂದಣಿ ಐಡಿ : KPF-S1-5249

0
Votes
95
Views
11 Months
Since posted

Finished since 284 days, 10 hours and 50 minutes.

Scroll to Top