Submission 621

ಬಿತ್ತುವೆಯಾ ಭಾವಗಳ !

ರಚನೆ : ಚಿನ್ನಿರಿ ಅಶೋಕ್‌ ಪೂಜಾರ

----------------------------------

ಬಿತ್ತುವೆಯಾ ಎನ್ನೊಳಗೆ ಬತ್ತದಿರೊ ಭಾವಗಳ. ಹರುಷ ಹತ್ತಿರ ಸುಳಿವ ಹತ್ತಾರು ಕನಸುಗಳ....! ಹೊಂಬೆಳಕಿನ ಮುಂಜಾವಲಿ ಕರೆಯುವೆಯಾ ಬೆಳದಿಂಗಳ. ಚೆಲುವಿನೊಡತಿಯೆ ಪಥದಿ ಹರಡುವೆಯಾ ಸುಮದಳಗಳ....! ಮೌನ ರಾಗವ ಮರೆಸಿ ಆಡುವೆಯಾ ಸವಿನುಡಿಗಳ. ಸುಪ್ತ ಮನದಾಳದಲಿ ಚೆಲ್ಲುವೆಯಾ ಜೇನನಿಗಳ....! ನೋವಿನಲೂ ಜೊತೆಗಿದ್ದು ಒರೆಸುವೆಯಾ ಈ ಕಂಗಳ. ಒಲವ ಸೋನೆಯ ಸುರಿಸಿ ತುಂಬುವೆಯಾ ಎದೆಯಂಗಳ....! ಹೃದಯದಪ್ಪುಗೆ ನೀಡಿ ಮರೆಸುವೆಯಾ ಕಹಿ ಕ್ಷಣಗಳ. ನೋವು ತುಂಬಿಹ ಬದುಕಲಿ ಹರಡುವೆಯಾ ಸಿಹಿ ಪರಿಮಳ....!

----------------------------------

ನೋಂದಣಿ ಐಡಿ : KPF-S1-5220

0
Votes
221
Views
1 Year
Since posted

Finished since 436 days, 13 hours and 20 minutes.

Scroll to Top