ನನ್ನವಳು, ನನ್ನ ಹೆತ್ತವಳು...
ರಚನೆ : ಪರಶುರಾಮ sk
----------------------------------
ಆ ದಿನವೆಕೋ ತಳಮಳ ನನ್ನವಳಲ್ಲಿ, ನಿಜ ಭಾವವ ಪದರೂಪಗಳಲ್ಲಿ ಲೇಖಿಸುವಲ್ಲಿ, ಹಂತ-ಹಂತದಿ ಸೋಲಾಗುತಿಹುದಲ್ಲಿ ಭಾಷಾ ಸಾಮರ್ಥ್ಯಕೊರತೆಯಿಂದೇನಲ್ಲ, ಮನದಲ್ಲೇ ಪೋಣಿಸಿದ ಪ್ರೀತಿಯತೆ, ಬಿಳಿಪುಟದ ಹಾಳೆಯ ಮೇಲೆ ಲೇಪನವಾಗುತ್ತಿರಲಿಲ್ಲವಷ್ಟೇ.. ಅತೀವ ದಯಾಮಯತೆ ನೀಡುವ ನನ್ನವಳು, ಕಡುಬಡವರ ಕಂಡಾಕ್ಷಣ ನಿಂತಲ್ಲೆ ಕರಗಿಹಳು , ಮುಂಬದಿ ನಿಂತ ಗರ್ಭಿಣಿ ಕಷ್ಟ-ಕಾರ್ಪಣ್ಯವ ನೋಡಿ ಮರುಗಿದವಳು, ತನ್ನ ಭೂತಕಾಲ ಸ್ಥಿತಿಯ ನೆನೆದವಳು, ನಿಜತನದಿ ಭಾವತೆಗೆ ಆತ್ಮವಾಗಿಹಳು, ಅವಳೇ ನನ್ನವಳು,ನನ್ನ ಹೆತ್ತವಳು..
----------------------------------
ನೋಂದಣಿ ಐಡಿ : KPF-S1-5185