Submission 523

ಆಸೆ

ರಚನೆ : ವಿಜೇತಾ ಜೋಷಿ

----------------------------------

ಇರುವುದೆಲ್ಲವ ಇರಲು ಬಿಟ್ಟು, ವೈರಾಗ್ಯವೆಂಬ ಕಾವಿಯ ತೊಟ್ಟು, ಅನಾಮಿಕ ಪಯಣಕ್ಕೆ ಹೆಸರನ್ನಿಟ್ಟು, ಕೇಳಬಹುದೇ ನಾದವ ಕಿವಿಯ ಕೊಟ್ಟು? ಓಡುತಿರುವ ಬಂಡಿಯನೊಮ್ಮೆ, ಇಳಿದು ಅಳಿಯಬಹುದೇ ದಾರಿಯನು? ಕುರುಡಾಗಿ ಕುಳಿತ ನೋಟವ ಒಮ್ಮೆ, ಇಣುಕಿ ತಣಿಸಬಹುದೇ ಕಂಗಳನು? ಅರ್ಥವಿಲ್ಲದ ಹುಚ್ಚು ಹುಡುಕಾಟದಲಿ, ಅರಿಯುವ ಆಸೆ ನಾನೇನು ಎಂದು. ತಿಳಿಯದೇ ಬರುವ ಭಯದ ಕಾಡಿನಲಿ, ಜೀವಿಸುವ ಆಸೆ ಜೀವದ ಹಂಗು ತೊರೆದು.

----------------------------------

ನೋಂದಣಿ ಐಡಿ : KPF-S1-5095

0
Votes
287
Views
1 Year
Since posted

Finished since 510 days, 1 hours and 26 minutes.

Scroll to Top