Submission 507

ಆಳುವ ಕಾಯ್ದೆಗಳು

ರಚನೆ : ಕು.ಬೀರಪ್ಪ ದು.ಡಂಬಳಿ,ಕೋಹಳ್ಳಿ

----------------------------------

ಹೆಣ್ಣು ಮಾನವಕುಲದ ಜಗದ ಕಣ್ಣು ಸಮಾಜದಲ್ಲಿ ಲಿಂಗ ತಾರತಮ್ಯದ ಪೆಣ್ಣು ಮಹಿಳಾ ಸಾಕ್ಷರತೆಯಲ್ಲಿ ಕೊನೆಯದಿ ಸಾಕ್ಷರತೆಯ ಹೆಚ್ಚಿಸಲು ಬೇಕು ಸಮಯದಿ ಹೆಣ್ಣು ಹೆತ್ತರೆ ಸಮಾಜದಗಣ್ಣು ಕೆಂಪಾದವು ಲಿಂಗ_ತಾರತಮ್ಯಕ್ಕೆ ಪರಿಹಾರ ಬೇಡವಾದವು ಮಹಿಳಾ ದೌರ್ಜನ್ಯಗಳು ಹೆಚ್ಚಾದವು ಆಳುವ ಕಾಯ್ದೆಗಳು ಜಾಣಮೌನವಹಿಸಿದವು ಮೌಢ್ಯತೆಯ ನಂಬಿಕೆಗಳು ರಾರಾಜಿಸಿದವು ಅನಿಷ್ಟ ಪದ್ಧತಿಗಳು ಜೀವಂತವಾಗಿಹವು ಸರ್ಕಾರಿ ಕಾಯ್ದೆಗಳು ಹೆಸರಿಗಾದವು ಸ್ತ್ರೀ ದೌರ್ಜನ್ಯಗಳು ಮುಂದುವರೆದವು ಸಂವಿಧಾನದಡಿ ಲಿಂಗ ಸಮಾನತೆಗೆ ಹೋರಾಡುವೆವು ಸಮಸಮಾಜ ನಿರ್ಮಾಣಕ್ಕೆ ಮುಂದಾಗೋಣ ನಾವು.

----------------------------------

ನೋಂದಣಿ ಐಡಿ : KPF-S1-5078

0
Votes
94
Views
11 Months
Since posted

Finished since 284 days, 10 hours and 28 minutes.

Scroll to Top