Submission 425

ಗುರಿ ಇಲ್ಲದ ಪಯಣ

ರಚನೆ : ಅಂಬರೀಶ್

----------------------------------

ಸಾಗುತಿದೆ ಗೊತ್ತು ಗುರಿಯಿಲ್ಲಿದ ಪಯಣ. ಹಲವು ಕಾವಲುಗಳ ನೂರಾರು ತಿರುವುಗಳ ಯಾನ. ಹೊರಟ ಪ್ರಯಾಣ ಗುರಿಯಿರದೆ ಬಿಟ್ಟ ಬಾಣ ಗುರಿಯಿರದ ಬಾಣ ತಲುಪಿಸಿದ ಪರಮಾತ್ಮನೇ ಜಾಣ. ಕಂಡಷ್ಟು ದಾರಿ ನಡೆದಷ್ಟು ಪ್ರಯಾಣ. ದಣಿವಾರಿಸಿಕೊಳ್ಳಲು ನಿಂತುಕೊಂಡೇ ಕಂಡ ನಿಲ್ದಾಣ. ಕಂಡ ನಿಲ್ದಾಣ ಹಲವು ವಿಸ್ಮಯಗಳ ತಾಣ. ನಿಲ್ಲಲ್ಲಾಗದೆ ತೊರೆದೆ ನಿಲ್ದಾಣದ ಆವರಣ. ಸಾಗುತ್ತಲೇ ಇರಬೇಕು ಬಹುದೂರ ನಮ್ಮ ಪ್ರಯಾಣ. ಜೀವನವೇ ಹೀಗೆ ಹಲವು ನಿಲ್ದಾಣಗಳ ಆವರಣ. ಕೊನೆಗೆ ನಿಂತು ಯೋಚಿಸಲೇಬೇಕು ನಡೆದು ಬಂದ ಜೀವನ..

----------------------------------

ನೋಂದಣಿ ಐಡಿ : KPF-S1-5006

0
Votes
264
Views
1 Year
Since posted

Finished since 509 days, 1 hours and 46 minutes.

Scroll to Top