ಸಪ್ತ ಸಾಗರದಾಚೆ ನನ್ನವಳ ಹೆಜ್ಜೆ
ರಚನೆ : ಗಂಗಾಧರ ಅರಳಿಕಟ್ಟಿ
----------------------------------
ಅರಿಯದೇ ಪ್ರೀತಿಸಿದೆ ಈ ಬಡವನ ಹುಚ್ಚುಮನ ಮರೆಯುವ ಶಬ್ದದ ಅರ್ಥವೇ ಗೊತ್ತಿರದ ಮುಗ್ಧ ನಾನ ಪ್ರೀತಿಯ ಆ ಹೆಸರಲಿ ಹೃದಯಕೆ ಹತ್ತಿರವಾದೆ ಪಿಸುನುಡಿಯ ಕೇಳದೆ ಮರಳಿ ಮರೆಯಾದೆ ಕನಸ ಕಂಡ ಕ್ಷಣಕ್ಷಣನೆ ಬಾರವಾಗುತಿದೆ ಈ ಜೀವ ನಿನ್ನಲ್ಲದೆ ಈ ಮನಸ್ಸಿಗೆ ಆಗಿದೆ ವಾಸಿಯಾಗದ ನೋವ ನಾಯಕಸಾನಿ ಅಗೆನ್ನುವ ಮುನ್ನ ಕಣ್ಣಿಗೆ ಕೈಗಿಟುಕತ ಕಾರಣಗಳ ಬೊಟ್ಟು ಇಟ್ಟುಹೋದವಳು ಭಾವನೆಗಳ ಕೊರಳಲಿ ಸಿಲುಕಿಸಿ ಉಸಿರುಗಟ್ಟಿಸುತ್ತಿಹಳು ಸಾಗರದಿ ಮರಳಲ್ಲಿ ಕಂಡ ನಿನ್ನ ಹೆಜ್ಜೆ ಹೃದಯ ಹರುಷದಿ ಸೂಚನೆ ಕೊಟ್ಟಿತ್ತು ಆ ಕಾಲಿಗೆ ತೋಡಿಸೆಂದು ಗೆಜ್ಜೆ ಅಲೆಯ ರಭಸಕೆ ಕರಗಿತು ಆ ಹೆಜ್ಜೆ
----------------------------------
ನೋಂದಣಿ ಐಡಿ : KPF-S1-5487