Submission 860

ರಾತ್ರಿ ಪಾಳಿ

ರಚನೆ : ಜಯರಾಮಾಚಾರಿ

----------------------------------

ಸಮೀಕ್ಷೆಗಳ ಪ್ರಕಾರ ರಾತ್ರಿ ಪಾಳಿಗಳು ಆರೋಗ್ಯವನ್ನು ಮುಕ್ಕಿ ಆಯಸ್ಸನ್ನು ಕುಕ್ಕಿ, ಖಿನ್ನತೆಯನ್ನು ರಾಚುತ್ತದೆಯಂತೆ ನನ್ನದು ಹತ್ತು ವರುಷಗಳಿಂದಲೂ ರಾತ್ರಿ ಪಾಳಿ ಮುಕ್ಕಿ ಹೋದ ನನ್ನ ಆರೋಗ್ಯವೆಷ್ಟು? ಕುಕ್ಕಿಸಿಕೊಂಡ ನನ್ನ ಆಯಸ್ಸು ಎಷ್ಟು? ರಾಚಿ ಬಂದ ಖಿನ್ನತೆಯ ಕನವರಿಕೆಗಳ ಲೆಕ್ಕ ಹಾಕಲು ಕೂತರೆ ದೊಡ್ಡದೊಂದು ಕೊನೆಯಾಗದ ಆಕಳಿಕೆ ನೇಣು ಹಾಕಿಕೊಂಡ ಅಪ್ಪನ, ಓಡಿ ಹೋದ ಅಮ್ಮನ ನಗರದ ದಿಕ್ಕಪಾಲಿನ, ಬದುಕಿನ ಅನಾಥತನದ ಪರಿಚಯ ಸಮೀಕ್ಷೆ ಮಾಡಿದವರಿಗೆ ಹೇಗೆ ಮಾಡಿಸುವುದು?! ಸಮೀಕ್ಷೆಗಳ ಓದಿದ ಮೇಲೆ ಖಾತೆಯಲ್ಲಿ ಕುಳಿತಿದ್ದ ರಜೆಗಳನ್ನು ಎಳೆದೆ ನಿದ್ದೆ ಮಾಡಲು ಪ್ರಯತ್ನಿಸಿ ಸೋತೆ ಕನಸಿನಲ್ಲಿ ಅಮ್ಮ ಅಪ್ಪನ ಜೊತೆ ಓಡಿಹೋದಳು ನಾನು ನಿದ್ದೆಗೆಟ್ಟು ಸಮೀಕ್ಷೆಗಳ ಓದುವುದು ಬಿಟ್ಟೆ

----------------------------------

ನೋಂದಣಿ ಐಡಿ : KPF-S1-5394

0
Votes
304
Views
1 Year
Since posted

Finished since 569 days, 17 hours and 31 minutes.

Scroll to Top