ಪುಟ್ಟ ಮನದ ಆಸೆ
ರಚನೆ : ಬಿಂದು ಯು
----------------------------------
ನಿನ್ನಯ ಯೋಚನೆಯಲ್ಲಿ.... ಈ ನನ್ನ ಮನ ನಿನ್ನ ಸನಿಹವನ್ನು ಬಯಸಿದೆ ಈ ನನ್ನ ಪುಟ್ಟ ಮನ.... ನಿನ್ನ ತೋಳಲ್ಲಿ ತಲೆ ಇಟ್ಟು ಎಲ್ಲಾ ಯೋಚನಾ ಲಹರಿಯಿಂದ ದೂರ ಸರಿದು ಚಂದದ ನಿದ್ದೆಗೆ ಜಾರುವ ಆಸೆ....ಈ ನನ್ನ ಮನಕ್ಕೆ ನಿನ್ನ ಎದೆಯ ಮೇಲೆ ಪುಟ್ಟ ಗುಬ್ಬಿಯ ಹಾಗೆ ಅವಚಿ ಈ ಪ್ರಪಂಚವನ್ನು ಮರೆತು ಸುಂದರ ಕನಸು ಕಾಣುವ ಆಸೆ.....ಈ ನನ್ನ ಮನಕ್ಕೆ ನಿನ್ನ ಮಾತಲ್ಲಿ ಕಳೆದು ಹೋಗಿ ನನ್ನನು ನಾನೇ ಹುಡುಕುವ ಆಸೆ.....ಈ ನನ್ನ ಮನಕ್ಕೆ ನಿನ್ನ ಮಡಿಲಲ್ಲಿ ಮಲಗಿ ಅಮ್ಮನ ಪ್ರೀತಿ ಸವಿಯುವ ಆಸೆ.. ಈ ನನ್ನ ಮನಕ್ಕೆ
----------------------------------
ನೋಂದಣಿ ಐಡಿ : KPF-S1-5387