Submission 832

ಮನದ ಮನೆ

ರಚನೆ : ರಶ್ಮಿ

----------------------------------

ಮನೆಯ ಮೂಲೆಯಲ್ಲಿದ್ದ ಜೇಡಗಳೆಲ್ಲ ಒಂದೊಂದೆ ಗೂಡು ಬಿಟ್ಟಿವೆ ಸುತ್ತೆಲ್ಲಿ ನೋಡಿದರು ಮೈಕೈಗಂಟುವ ದುಂಬು. ನನ್ನ ನಾನೇ ಕೊಂದು ಹೂತಿಟ್ಟ ಗೋರಿಬೇರೆ ಎಲ್ಲಿಹುದೊ ಕಾಣೆ ಹುಡುಕಬೇಕು ಈ ಕತ್ತಲಲೇ ಮಿಂದು.ಕಳೆದೆರಡು ಶ್ರಾವಣಗಳಿಂದ ಇಲ್ಲೇ ಬೀಡುಬಿಟ್ಟಿವೆ ಬಾವಲಿಗಳ ಹಿಂಡು. ಬರುವ ಶ್ರಾವಣಕ್ಕಾದರು ಕಿಟಕಿ ತೆರೆದು ಬೆಳಕೊಂದ ಕಾಣಬೇಕು. ಗೋರಿಯ ಮೇಲೊಂದು ಗಿಡ ನೆಟ್ಟು ಅದಕಿನಿತು ನೀರೆರೆಯ ಬೇಕು. ಅಂಗಳದಿ ದುಂಬ ವರೆಸಿ ಪುಟ್ಟ ಎಳೆ ರಂಗೋಲಿಯೊಂದ ಬಿಡಿಸಬೇಕು ಶ್ರಾವಣದ ಸಂಜೆಯಲಿ ಧೂಪದ ಹೊಗೆ ಘಮಿಸಬೇಕು.

----------------------------------

ನೋಂದಣಿ ಐಡಿ : KPF-S1-5377

0
Votes
271
Views
1 Year
Since posted

Finished since 506 days, 18 hours and 59 minutes.

Scroll to Top