Submission 780

ಕರುಳ ಬೆಲೆ

ರಚನೆ : ಅಶ್ವಿನಿ ಭೀಮಪ್ಪ ಬರಗಾಲಿ

----------------------------------

ಜಗದೊಳಗೆ ಬೆಲೆ ಕಟ್ಟಲಾಗದ ಮನದೊಳಗೆ ನಮಿಸಲು ಆಗದ ನೆನೆವಾಗ ನೆನಪೊಳಗೆ ಮುಗಿಯದ ಕನವರಿಕೆಯೊಳಗೆ ಮುಗುಚಿ ಹೋಗದ ಅತ್ತಾಗ ನೋವಲಿ ದೂರವಾಗದ ನಗುವಾಗ ನೆಪಹುಡುಕಿ ದೂರದ ಉಸಿರಿರುವ ತನಕ ತನಗಾಗದ ಬೆಳಕಿರುವವರೆಗೆ ತನ್ಮೊಗವ ನೋಡದ ಹಸಿವಿರುವಲ್ಲಿ ಹುಸಿಕೋಪ ತೋರದ ಬಿದ್ದಾಗ ಬೈಗುಳದ ಅರ್ಚನೆಯಾಡದ ಗೆದ್ದಾಗ ತೋರಿಕೆ ಖುಷಿಯಲಿ ತೇಲದ ನಮ್ಮೊಳಗೆ ಅವಿತು ಬೆರೆತು ಒಂದಾಗಿಹ ಕಣ್ರೆಪ್ಪೆಯ ಅಂಚಿನಲಿ ಕಾಯುತಿಹ ಕರುಳಿಗೆ ಯಾವ ಬೆಲೆಯ ಕಟ್ಟಲಾದೀತು !!

----------------------------------

ನೋಂದಣಿ ಐಡಿ : KPF-S1-5353

0
Votes
272
Views
1 Year
Since posted

Finished since 508 days, 1 hours and 30 minutes.

Scroll to Top