Submission 503

ಬದುಕು ಬಂದಂತೆ

ರಚನೆ : ಅರವಿಂದ ಸ್ವಾಮಿ ಮಂಜುಳ

----------------------------------

ಬದುಕು ಜೀವವೇ ನಿನ್ನಯ ಬಾಳ ಹೋಲಿಸದೆ, ಬರರು ಯಾರೂ ನಿನ್ನ ಕಾಪಾಡಲು ಹೊರಬೇಕು ನಿನ್ನಯ ಕರ್ಮವ ನೀನೇ ಉಳಿಸದೆ, ಮನಬಿಚ್ಚಿ ಮಾತಾಡು,ನಗು ಯಾರನ್ನು ನೋಯಿಸಿದೆ, ನೆನಪು ಎಷ್ಟು ಮಧುರವೋ ಅಷ್ಟೇ ಕಠೋರ ಬಳಸಿದಷ್ಟೂ ಹಿಂಡುವುದು ಎಲ್ಲರ ಎದೆ, ನೆನಪಿಗೂ,ಕರ್ಮಕ್ಕೂ ಬೇಧವೆ ಇಲ್ಲ ಎರಡು ಅಡಗಿರುವುದು ಮನಸ್ಸಿನ ಹಿಂದೆ, ನೀ ಕೇವಲ ದರ್ಪಣವಾದರೆ ಈ ಜಗತ್ತು ಬರೀ ಪ್ರತಿಬಿಂಬದ ಪರದೆ, ಕನ್ನಡಿಯ ಹಿಂದೇ ಭ್ರಮೆ ಕಳೆದು ನಿಂತು ನೋಡು ಕಾಣಸಿಗುವ ಕಾಣೆಯಾದ ವ್ಯಕ್ತಿ, ಅದು ಅಸೂಯೆ,ದುರಾಸೆ,ದುಃಖ,ಸಂಕಟ, ಬೇಧಗಳಿಲ್ಲದ ಮನುಷ್ಯನಂತರಂಗದ ಪ್ರಜ್ಞೆಯ ಶಕ್ತಿ.

----------------------------------

ನೋಂದಣಿ ಐಡಿ : KPF-S1-5074

0
Votes
276
Views
1 Year
Since posted

Finished since 509 days, 9 hours and 6 minutes.

Scroll to Top