ಬಹುರೂಪಿ
ರಚನೆ : ಮೋಹನ್ ಮೂರ್ತಿ ಮಾ ಕೆಂ
----------------------------------
ನನ್ನೊಂದು ವರ್ಷದ ಮಗಳು ಪಕ್ಕಾ ಸಮಾಜವಾದಿ. ಸರ್ವರಿಗೂ ಸಮಪಾಲು, ಸಮಬಾಳೆಂಬ ತತ್ವದಲ್ಲವಳಿಗೆ ಅಪಾರ ನಂಬಿಕೆ ಅಪ್ಪ ಅಮ್ಮ, ಅತ್ತೆ ಮಾವ, ತಾತ ಅಜ್ಜಿ ಭೇದ ಭಾವದ ಪ್ರಶ್ನೆಯೇ ಇಲ್ಲ ಯಾರೇ ಎತ್ತಿಕೊಳ್ಳಲಿ, ನಿಮಿಷ ಮಾತ್ರದಲ್ಲಿ ಅವರ ಬಟ್ಟೆ ಒದ್ದೆ ! ಅವಳು ಪ್ರಳಯಾಗ್ನಿ ಗಮನಿಸದಿದ್ದಲ್ಲಿ, ಕಡ್ಡಿ ಕಾಳು, ಬಟ್ಟೆ ಕಾಗದ ಸರ್ವವೂ ಕ್ಷಣಾರ್ಧದಲ್ಲಿ ಸ್ವಾಹಾ! ಅವಳು ಕಠೋರ ಸನ್ಯಾಸಿನಿ ಇಹಲೋಕದ ಹತ್ತು, ನೂರು, ಐನೂರು, ಎಲ್ಲದರ ಮೇಲೂ ವೈರಾಗ್ಯ ಕಡೆಗೆ ಎರಡು ಸಾವಿರದ ಪಿಂಕಿ ಸಿಕ್ಕರೂ ಅರೆ ಕ್ಷಣದಲ್ಲಿ ಚಿಂದಿ !
----------------------------------
ನೋಂದಣಿ ಐಡಿ : KPF-S1-5037